
ನಮ್ಮ ಬಗ್ಗೆ
ಹೆಗ್ಗಡೆ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ತಲುಪಬೇಕು, ಪ್ರತಿಯೋರ್ವ ಹೆಗ್ಗಡೆ ಬಂಧುವಿಗೂ ಸಮಾನ ವೇದಿಕೆಯನ್ನು ಕೊಡಬೇಕು ಎನ್ನುವ ಉದ್ದೇಶದಿಂದ ಪ್ರೇರಣಾ ಹೆಗ್ಗಡೆ ವಾಹಿನಿಯನ್ನು ಹೊರತರುತ್ತಿದ್ದೇವೆ. ಇದು ಹತ್ತು ವರುಷಗಳ ಹಿಂದಿನ ಕನಸು. ಕಾರಣಾಂತರಗಳಿಂದ ತಡವಾಗಿ ನಿಮ್ಮ ಕೈಸೇರಿದೆ ಆದರೆ ಅತ್ಯಂತ ಸಂತಸ ಮತ್ತು ಸಾರ್ಥಕ್ಯ ಭಾವದಿಂದ ನಿಮ್ಮ ಮುಂದೆ ಬರುತ್ತಿದ್ದೇವೆ. ಇಲ್ಲಾವುದೇ ರಾಗ ದ್ವೇಷಗಳಿಗೆ ಜಾಗವಿಲ್ಲ. ರಾಜಕೀಯದ ಗಂಧಗಾಳಿಯೂ ಸೋಕದಂತೆ ಕೇವಲ ನಮ್ಮ ಸಮಾಜವನ್ನು ಒಂದೇ ವೇದಿಕೆಯಡಿ ತರಬೇಕೆನ್ನುವ ಧೈಯೊದ್ದೇಶದೊಂದಿಗೆ ಹೊರಟಿದ್ದೇವೆ,ನಮ್ಮ ಸಮಾಜದಲ್ಲಿ ಸಾಧಕರಿಗೇನೂ ಕಡಿಮೆಯಿಲ್ಲ. ಸಾಧನೆಯ ಶಿಖರವನ್ನೇರಿದ ಅದೆಷ್ಟೋ ಯುವ ಪ್ರತಿಭೆಗಳು ಎಲೆ ಮರೆಯ ಕಾಯಿಯಂತೆ ಸಮಾಜದ ಮುಖ್ಯವಾಹಿನಿಗೆ ಬರಲಿಲ್ಲ ಅಥವಾ ನಾವೇ ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತಂದು ಗುರುತಿಸಿ ಬೆನ್ನು ತಟ್ಟುವುದರಲ್ಲಿ ವಿಫಲರಾಗಿದ್ದೇವೆ. 'ಪ್ರೇರಣಾ ಹೆಗ್ಗಡೆ ವಾಹಿನಿ' ನಿಮ್ಮ ಮುಂದೆ ತರುತ್ತಿರುವ ಪ್ರಮುಖ ಉದ್ದೇಶ ನಮ್ಮ ಸಮಾಜದ ಪ್ರತಿಭೆಗಳಿಗೆ ಸೂಕ್ತ ವೇದಿಕೆ ನಿರ್ಮಾಣ. ಪ್ರೇರಣಾ ಹೆಗ್ಗಡೆ ವಾಹಿನಿಯ ಮೂಲಕ ನಮ್ಮ ಸಮಾಜದ ಯುವ ಪ್ರತಿಭೆಗಳಲ್ಲಿ ಅಡಕವಾಗಿರುವ ಸುಪ್ತ ಪ್ರತಿಭೆಗಳನ್ನು ಹೊರತಂದು ಸಮಾಜದ ಮುಂದಿಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ
ನಮ್ಮ ತಂಡ
ಸಂಸ್ಥಾಪಕರು
ಶ್ರೀ ಅಶ್ವಥ್ ಹೆಗ್ಗಡೆ ಬಾಲಂಜ
ಸಹ ಸಂಸ್ಥಾಪಕರು
ಶ್ರೀ ಮನೋಜ್ ಹೆಗ್ಗಡೆ ಎಳ್ನಾಡು ಗುಟ್ಟು
ಸಹ ಸಂಸ್ಥಾಪಕರು
ಶ್ರೀಮತಿ ಅಪೇಕ್ಷಾ ಅಶ್ವಥ್ ಹೆಗ್ಗಡೆ
ಗೌರವ ಸಂಪಾದಕೀಯ ಸಲಹೆಗಾರರು
ಡಾ. ಸುರೇಂದ್ರ ಕುಮಾರ ಹೆಗ್ಗಡೆ
ಗೌರವ ಸಂಪಾದಕೀಯ ಸಲಹೆಗಾರರು
ಶ್ರೀಮತಿ ಮಿತ್ರಪ್ರಭಾ ಹೆಗ್ಗಡೆ
ಗೌರವ ಸಂಪಾದಕೀಯ ಸಲಹೆಗಾರರು
ಶ್ರೀ ಶ್ಯಾಮ್ ಹೆಗ್ಗಡೆ ಬೆಳುವಾಯಿ
ಗೌರವ ಸಂಪಾದಕೀಯ ಸಲಹೆಗಾರರು
ಡಾ. ಸುಲತಾ ಹೆಬ್ರಿ
ಗೌರವ ಸಂಪಾದಕೀಯ ಸಲಹೆಗಾರರು
ಶ್ರೀ ವಿ. ಕೆ. ವಲ್ಪಾಡಿ
ಗೌರವ ಸಂಪಾದಕೀಯ ಸಲಹೆಗಾರರು
ಶ್ರೀ ರವಿ ಹೆಗ್ಗಡೆ ಹರ್ಮುಂಡೆ